ಪ್ರಿಯ ಕರ್ನಾಟಕದ ಜನತೆಗೆ,
ನಾನು ಒಬ್ಬ ನುರಿತ ವಕೀಲನಾಗಿ ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದೇನೆ...
ಒಬ್ಬ ಬರಹಗಾರನಾಗಿ ಸಮಾಜದ ನೋವು, ಅನ್ಯಾಯ ಮತ್ತು ಜನರ ಆಶಯಗಳಿಗೆ ಪದಗಳ ರೂಪ ನೀಡಿದ್ದೇನೆ...
ಒಬ್ಬ ಹಿರಿಯ ಪತ್ರಕರ್ತನಾಗಿ ಅಧಿಕಾರವನ್ನು ಪ್ರಶ್ನಿಸಿ, ಸತ್ಯದ ಪರವಾಗಿ ನಿಲ್ಲುವ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ...
ಇಂದು ಅದೇ ಅನುಭವ, ಬದ್ಧತೆ ಮತ್ತು ಜನಸೇವೆಯ ಸಂಕಲ್ಪದೊಂದಿಗೆ ರಾಷ್ಟ್ರೀಯ ಜನಹಿತ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷನಾಗಿ ನಿಮ್ಮ ಮುಂದೆ ನಿಂತಿದ್ದೇನೆ.
ಈ ಜವಾಬ್ದಾರಿ ನನಗೆ ದೊರೆತಿರುವ ಒಂದು ಹುದ್ದೆಯಲ್ಲ...
ಇದು ಕರ್ನಾಟಕದ ಜನರ ಭರವಸೆಯನ್ನು ಸಾಕಾರಗೊಳಿಸುವ ಕರ್ತವ್ಯ.
ನಮ್ಮ ರಾಜಕೀಯದ ಕೇಂದ್ರಬಿಂದುವಿನಲ್ಲಿ ಅಧಿಕಾರ ಇರಬಾರದು...
ಜನಹಿತ ಇರಬೇಕು.
ನಮ್ಮ ರಾಜಕೀಯದಲ್ಲಿ ವ್ಯಕ್ತಿಪೂಜೆಗಿಂತ ತತ್ವಗಳಿಗೆ, ಕುಟುಂಬ ರಾಜಕೀಯಕ್ಕಿಂತ ಸಾಮಾನ್ಯ ಕಾರ್ಯಕರ್ತರಿಗೆ, ಜಾತಿ-ಹಣದ ಪ್ರಭಾವಕ್ಕಿಂತ ಪ್ರಾಮಾಣಿಕತೆ, ಸಾಮರ್ಥ್ಯ ಮತ್ತು ಸೇವಾ ಮನೋಭಾವಕ್ಕೆ ಆದ್ಯತೆ ನೀಡಲಾಗುತ್ತದೆ.
ಕರ್ನಾಟಕದ ಪ್ರತಿಯೊಂದು ರೈತನ ಕಣ್ಣೀರಿಗೂ...
ಪ್ರತಿಯೊಬ್ಬ ಯುವಕನ ಕನಸಿಗೂ...
ಪ್ರತಿಯೊಬ್ಬ ಮಹಿಳೆಯ ಆತ್ಮಗೌರವಕ್ಕೂ...
ಕಾರ್ಮಿಕರ ಪರಿಶ್ರಮಕ್ಕೂ...
ಸಣ್ಣ ವ್ಯಾಪಾರಿಗಳ ಹೋರಾಟಕ್ಕೂ...
ಸಾಮಾನ್ಯ ಕುಟುಂಬಗಳ ಭವಿಷ್ಯಕ್ಕೂ ನ್ಯಾಯ ದೊರೆಯುವ ಆಡಳಿತಕ್ಕಾಗಿ ರಾಷ್ಟ್ರೀಯ ಜನಹಿತ ಪಕ್ಷ ಶ್ರಮಿಸಲಿದೆ.
ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆಮೂಲೆಗೂ ತಲುಪಿ, ಮಹಿಳೆಯರು, ಯುವಕರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯಮಿಗಳು, ವೃತ್ತಿಪರರು ಹಾಗೂ ಸಮಾಜದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ಬಲಿಷ್ಠ ಜನಾಂದೋಲನವನ್ನು ನಿರ್ಮಿಸುವುದು ನಮ್ಮ ಮೊದಲ ಗುರಿಯಾಗಿದೆ.
2028ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ರಾಷ್ಟ್ರೀಯ ಜನಹಿತ ಪಕ್ಷವನ್ನು ಜನರ ವಿಶ್ವಾಸ ಗಳಿಸಿದ ಬಲಿಷ್ಠ ರಾಜಕೀಯ ಪರ್ಯಾಯವಾಗಿ ರೂಪಿಸಲು ನಾನು ಮತ್ತು ನನ್ನ ತಂಡ ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತೇವೆ.
ಅಧಿಕಾರವು ನಮ್ಮ ಅಂತಿಮ ಗುರಿಯಲ್ಲ...
ಜನರ ಬದುಕಿನಲ್ಲಿ ಶಾಶ್ವತ ಬದಲಾವಣೆ ತರುವ ಸಾಧನವೇ ಅಧಿಕಾರ ಎಂಬ ನಂಬಿಕೆಯೊಂದಿಗೆ ನಾವು ಮುನ್ನಡೆಯುತ್ತೇವೆ.
ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ತಾಲೂಕು, ಪ್ರತಿಯೊಂದು ಗ್ರಾಮದಲ್ಲಿ ಪಕ್ಷವನ್ನು ಬಲಪಡಿಸಿ, ಸಾಮಾನ್ಯ ಕಾರ್ಯಕರ್ತನೇ ನಮ್ಮ ಶಕ್ತಿಯಾಗುವ ಸಂಘಟನೆಯನ್ನು ಕಟ್ಟುವುದು ನಮ್ಮ ಸಂಕಲ್ಪ.
ಪ್ರತಿಯೊಬ್ಬ ಸದಸ್ಯನೂ ಒಬ್ಬ ನಾಯಕನಾಗಬೇಕು...
ಪ್ರತಿಯೊಬ್ಬ ನಾಯಕನೂ ಒಬ್ಬ ಸೇವಕನಾಗಬೇಕು...
ಪ್ರತಿಯೊಂದು ಗ್ರಾಮವೂ ಬದಲಾವಣೆಯ ಕೇಂದ್ರವಾಗಬೇಕು...
ಪ್ರತಿಯೊಬ್ಬ ಮತದಾರನಿಗೂ "ಪ್ರಾಮಾಣಿಕ ರಾಜಕೀಯ ಸಾಧ್ಯ" ಎಂಬ ವಿಶ್ವಾಸ ಮೂಡಬೇಕು...
ಇದೇ ನನ್ನ ಕನಸು.
ಈ ಪಯಣ ನನ್ನೊಬ್ಬನದಲ್ಲ...
ಇದು ನ್ಯಾಯ, ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನಹಿತವನ್ನು ನಂಬಿರುವ ಪ್ರತಿಯೊಬ್ಬ ಕನ್ನಡಿಗನ ಪಯಣ.
ಬನ್ನಿ... ಕೈಜೋಡಿಸಿ.
ಹೊಸ ರಾಜಕೀಯ ಸಂಸ್ಕೃತಿಯನ್ನು ನಿರ್ಮಿಸೋಣ.
ಹೊಸ ನಾಯಕತ್ವವನ್ನು ಬೆಳೆಸೋಣ.
ಹೊಸ ಕರ್ನಾಟಕವನ್ನು ಕಟ್ಟೋಣ.
ಸೇವೆ ನಮ್ಮ ಧ್ಯೇಯ...
ಜನಹಿತ ನಮ್ಮ ಸಂಕಲ್ಪ...
ವೀರೇಂದ್ರಬಾಬು ನಂಜೇಗೌಡ
MBA., LLB., PhD (Pursuing)
ವಕೀಲ | ಬರಹಗಾರ | ಹಿರಿಯ ಪತ್ರಕರ್ತ
ಕರ್ನಾಟಕ ರಾಜ್ಯಾಧ್ಯಕ್ಷರು
ರಾಷ್ಟ್ರೀಯ ಜನಹಿತ ಪಕ್ಷ (RJP)