ಪ್ರತಿ ನಿರ್ಧಾರದ ಹಿಂದೆ ಇರುವುದು ಒಂದೇ ಪ್ರಶ್ನೆ — ಇದರಿಂದ ಸಾಮಾನ್ಯ ಪ್ರಜೆಗೆ ಏನು ಪ್ರಯೋಜನ?
ಭ್ರಷ್ಟಾಚಾರ ಮುಕ್ತ ಆಡಳಿತ
ಪಾರದರ್ಶಕ ಸರ್ಕಾರ
ಜನರ ತೆರಿಗೆ ಹಣಕ್ಕೆ ಜನರ ಮುಂದೆ ಲೆಕ್ಕ
ಅರ್ಹತೆಗೆ ಅವಕಾಶ, ಶಿಫಾರಸಿಗಲ್ಲ
ಜಾತಿ-ಧರ್ಮದ ರಾಜಕೀಯಕ್ಕಿಂತ ಅಭಿವೃದ್ಧಿ ರಾಜಕೀಯ
ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಮೊದಲ ಆದ್ಯತೆ
ರೈತರು, ಕಾರ್ಮಿಕರು, ಮಧ್ಯಮ ವರ್ಗದ ರಕ್ಷಣೆ
ನಾವು ಕೇವಲ ರಾಜಕೀಯ ಬದಲಾವಣೆಗಾಗಿ ಬಂದಿಲ್ಲ — ನಾವು ಬಂದಿರುವುದು ರಾಜಕೀಯ ಸಂಸ್ಕೃತಿ ಬದಲಾವಣೆಗಾಗಿ. ಇಲ್ಲಿ ವ್ಯಕ್ತಿಪೂಜೆಗೆ ಜಾಗವಿಲ್ಲ; ಇರುವುದು ಕೇವಲ ಜನಹಿತದ ಬದ್ಧತೆ.
ವ್ಯಕ್ತಿಗಳಲ್ಲ, ಮೌಲ್ಯಗಳೇ ನಮ್ಮ ರಾಜಕೀಯದ ಅಡಿಪಾಯ.
ಗಟ್ಟಿಯಾದ ವ್ಯವಸ್ಥೆಯೊಂದೇ ದೀರ್ಘಕಾಲೀನ ಬದಲಾವಣೆ ತರುತ್ತದೆ.
ಪ್ರತಿ ಜನಪ್ರತಿನಿಧಿಗೂ ವಾರ್ಷಿಕ ಕಾರ್ಯಕ್ಷಮತೆ ವರದಿ ಕಡ್ಡಾಯ.