ಪ್ರತಿ ಸೇವೆಯೂ ಲಂಚ ರಹಿತವಾಗಿ ಸಿಗುವಂತಹ ವ್ಯವಸ್ಥೆ ನಿರ್ಮಾಣ.
ಪ್ರತಿ ಫೈಲ್, ಪ್ರತಿ ನಿರ್ಧಾರ ಆನ್‌ಲೈನ್‌ನಲ್ಲಿ ಪಾರದರ್ಶಕ.
ಸೇವೆ ವಿಳಂಬವಾದರೆ ಅಧಿಕಾರಿಗಳ ಹೊಣೆಗಾರಿಕೆ ಕಡ್ಡಾಯ.
ಪ್ರತಿ ಜನಪ್ರತಿನಿಧಿಗೂ ವಾರ್ಷಿಕ ಕಾರ್ಯಕ್ಷಮತೆ ವರದಿ.
ಪಕ್ಷದ ಪ್ರತಿ ದೇಣಿಗೆಯೂ ಸಾರ್ವಜನಿಕರ ಮುಂದೆ ದಾಖಲಾಗುತ್ತದೆ.
ನ್ಯಾಯಸಮ್ಮತ, ಸ್ವತಂತ್ರ ಆಂತರಿಕ ಪ್ರಜಾಪ್ರಭುತ್ವ.
ನಿರ್ಧಾರ ಕೈಗೊಳ್ಳುವ ವೇದಿಕೆಯಲ್ಲಿ ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ.
ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಮೊದಲ ಆದ್ಯತೆ ನೀಡುವ ಡಿಜಿಟಲ್ ವ್ಯವಸ್ಥೆ.
ಅಲ್ಲಿ... ಲಂಚವಿಲ್ಲದೆ ಕೆಲಸ ಆಗಬೇಕು. ಅಲ್ಲಿ... ಪ್ರತಿಭೆಗೆ ಅವಕಾಶ ಸಿಗಬೇಕು, ಶಿಫಾರಸಿಗಲ್ಲ. ಅಲ್ಲಿ... ರೈತ ಗೌರವದಿಂದ ಬದುಕಬೇಕು. ಅಲ್ಲಿ... ಯುವಕ ಉದ್ಯೋಗಕ್ಕಾಗಿ ಊರು ಬಿಡುವ ಪರಿಸ್ಥಿತಿ ಕಡಿಮೆಯಾಗಬೇಕು. ಅಲ್ಲಿ... ಸಾಮಾನ್ಯ ನಾಗರಿಕನ ಧ್ವನಿ ಅಧಿಕಾರದ ಕೇಂದ್ರಕ್ಕೆ ತಲುಪಬೇಕು.
"ಒಬ್ಬ ವ್ಯಕ್ತಿಯ ಕನಸಲ್ಲ... ಕೋಟಿ ಜನರ ಆಶಯ"